`ಜಗ್ಗಿ` ಚಿತ್ರದ ಚಿತ್ರೀಕರಣ ಪೂರ್ಣ
Posted date: 01 Tue, Apr 2014 – 09:46:28 AM

ಅಭಿನಂದನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ಎನ್.ಎಸ್ ಶ್ರೀನಿವಾಸ ಅವರು ನಿರ್ಮಿಸುತ್ತಿರುವ, ವಿ.ಎಂ.ರಾಜು ನಿರ್ದೇಶನದ  ‘ಜಗ್ಗಿ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಎಲ್ವಿನ್‌ಜೋಶ್ವ ಸಂಗೀತ ನಿರ್ದೇಶನದ ಆರು ಹಾಡುಗಳು ಸುಮಧುರವಾಗಿ ಮೂಡಿಬಂದಿದೆ. ಇದೇ ತಿಂಗಳ ಕೊನೆಯಲ್ಲಿ ಹಾಡುಗಳ ಸೀಡಿ ಬಿಡುಗಡೆಯಾಗಲಿದೆ.
    ನಿರ್ದೇಶಕರೆ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸುನೀಲ್‌ರಾಜ್ ಕಥೆ ಬರೆದಿದ್ದಾರೆ. ಮಂಜುಭಾಸ್ಕರ್ ಅವರ ಸಹನಿರ್ಮಾಣವಿರುವ ಈ ಚಿತ್ರಕ್ಕೆ ರಮೇಶ್‌ಕೊಯಿರ ಛಾಯಾಗ್ರಹಣ, ಈಶ್ವರ್ ಸಂಕಲನ, ಮದನ್ ಹರಿಣಿ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್, ಹ್ಯಾರಿಸ್ ಜಾನಿ ಸಾಹಸ ನಿರ್ದೇಶನವಿದೆ. ಸುನೀಲ್‌ರಾಜ್, ಅಹನಾ, ರಮೇಶ್‌ಭಟ್, ಶರತ್‌ಲೋಹಿತಾಶ್ವ, ಮುನಿ, ಬುಲೆಟ್‌ಪ್ರಕಾಶ್, ಪೆಟ್ರೋಲ್ ಪ್ರಸನ್ನ, ಮೋಹನ್ ಜುನೇಜ, ವಿಶ್ವ, ಕೆಂಪೇಗೌಡ, ಪ್ರಕಾಶ್, ಎಂ.ಎನ್.ಲಕ್ಷ್ಮೀದೇವಮ್ಮ, ಸಂಗೀತ, ರೋಷಿಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed